Wednesday, December 1, 2010

ಕಾಗಿನೆಲೆ

ಕಾಗಿನೆಲೆ ಕನಕ ದಾಸರ ಕರ್ಮಭೂಮಿ. ಹಾವೇರಿ ಜಿಲ್ಲೆಯಲ್ಲಿ ಕಾಗಿನೆಲೆ ಇದೆ. ಬಡಾ ಎಂಬ ಹಳ್ಳಿಯಲ್ಲಿ ಬೀಚಮ್ಮ ಮತ್ತು ಬಿರೇ ಗೌಡ ಎಂಬ ದಂಪತಿಗೆ ತಿಮಪ್ಪ ನಾಯಕರು(ಕನಕದಾಸರು) ಹುಟ್ಟಿದರು. ಅವರ ಆರಾಧ್ಯ ದೈವ ಕಾಗಿನೆಲೆಯ ಆದಿಕೇಶವನಾಗಿದ್ದ. ಕನಕದಾಸರ ಪದಗಳು "ಕಾಗಿನೆಲೆ ಆದಿಕೇಶವ" ಎಂಬ ಅಂಕಿತ ನಾಮದಿಂದ ಮುಕ್ತಾಯ ಗೊಳ್ಳುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಕಾಗಿನೆಲೆ ಅಭಿವೃದ್ದಿಗಾಗಿ "ಕಾಗಿನೆಲೆ ಅಭಿವೃದ್ದಿ ಪ್ರಾದಿಕಾರ" ಸ್ತಪನೆ ಮಾಡಿದೆ.